top of page

ವಿಶ್ವದ ಅತಿ ದೊಡ್ಡ ಕಿಡ್ನಿ ಕಲ್ಲು ಹೊರ ತೆಗೆದು ಗಿನ್ನೆಸ್ ದಾಖಲೆ ನಿರ್ಮಾಣ ಮಾಡಿದ ಶ್ರೀಲಂಕಾ ವೈದ್ಯರು

  • Writer: DoubleClickMedia
    DoubleClickMedia
  • Jun 15, 2023
  • 1 min read

World's Largest Kidney Stone

ಶ್ರೀಲಂಕಾ ಜೂನ್‌14, 2023 :ವಿಶ್ವದ ಅತಿ ದೊಡ್ಡ ಕಿಡ್ನಿ ಕಲ್ಲನ್ನು ತೆಗೆಯುವ ಮೂಲಕ ಶ್ರೀಲಂಕಾದ ಸೇನಾ ವೈದ್ಯರು ಗಿನ್ನೆಸ್ ದಾಖಲೆಯನ್ನೇ ನಿರ್ಮಿಸಿದ್ದಾರೆ. 2004ರಲ್ಲಿ ಭಾರತೀಯ ವೈದ್ಯರ ಹೆಸರಿನಲ್ಲಿ ನಿರ್ಮಾಣವಾಗಿದ್ದ ದಾಖಲೆಯನ್ನು ಶ್ರೀಲಂಕಾ ಸೇನೆಯ ವೈದ್ಯರು ಮುರಿದಿದ್ದಾರೆ.


ಶ್ರೀಲಂಕಾ ರಾಜಧಾನಿ ಕೊಲಂಬೋದ ಸೇನಾ ಆಸ್ಪತ್ರೆಯಲ್ಲಿ ಜೂನ್ ಆರಂಭದಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ 13.373 ಸೆಂಟಿ ಮೀಟರ್‌ಗೂ ಹೆಚ್ಚು ಉದ್ದದ ಕಿಡ್ನಿ ಕಲ್ಲನ್ನು ಹೊರಗೆ ತೆಗೆದಿದ್ದಾರೆ. ಈ ಕಲ್ಲು 801 ಗ್ರಾಂ ತೂಕವಿತ್ತು ಎಂದು ಸೇನೆ ನೀಡಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



ಶ್ರೀಲಂಕಾದ ಕೊಲಂಬೋದಲ್ಲಿ ಇರುವ ಸೇನಾ ಆಸ್ಪತ್ರೆಯ ಮೂತ್ರ ಶಾಸ್ತ್ರಜ್ಞ ಲೆಫ್ಟಿನೆಂಟ್ ಕರ್ನಲ್ ಡಾ. ಕೆ. ಸುದರ್ಶನ್ ಹಾಗೂ ಅವರ ತಂಡ ಈ ಅಪರೂಪದ ಶಸ್ತ್ರ ಚಿಕಿತ್ಸೆ ನಡೆಸಿತು ಎಂದು ಶ್ರೀಲಂಕಾ ಸೇನೆಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ವಿಶ್ವದ ಅತಿ ದೊಡ್ಡ ಕಿಡ್ನಿ ಕಲ್ಲನ್ನು ಶ್ರೀಲಂಕಾ ದೇಶದ ರಾಜಧಾನಿ ಕೊಲಂಬೋದ ಸೇನಾ ಆಸ್ಪತ್ರೆಯಲ್ಲಿ ಜೂನ್ 1, 2023ರಂದು ಹೊರಗೆ ತೆಗೆದು ದಾಖಲೆ ನಿರ್ಮಾಣವಾಗಿದೆ ಎಂದು ಗಿನ್ನೆಸ್ ವಿಶ್ವ ದಾಖಲೆ ಸಂಘಟಕರೂ ಕೂಡಾ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.



2004ರಲ್ಲಿ ಭಾರತದ ವೈದ್ಯರು ಗಿನ್ನೆಸ್ ದಾಖಲೆ ಮಾಡಿದ್ದರು:


2004ರಲ್ಲಿ ಭಾರತೀಯ ವೈದ್ಯರು 13 ಸೆಂಟಿ ಮೀಟರ್ ಉದ್ದದ ಕಿಡ್ನಿ ಕಲ್ಲನ್ನು ಹೊರಗೆ ತೆಗೆದಿದ್ದರು. ಇದೇ ಈವರೆಗಿನ ಅತಿ ದೊಡ್ಡ ಕಿಡ್ನಿ ಕಲ್ಲು ಎಂದು ಗಿನ್ನೆಸ್ ದಾಖಲೆ ನಿರ್ಮಾಣವಾಗಿತ್ತು

Comments


bottom of page