ದಕ್ಷಿಣ ಕನ್ನಡ: ವಿಶೇಷ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
- DoubleClickMedia
- Jun 13, 2023
- 1 min read
ಮಂಗಳೂರು,ಜೂ.12: ಸಮನ್ವಯ ಶಿಕ್ಷಣದ ಕಾರ್ಯತಂತ್ರದಡಿ ಜಿಲ್ಲೆಯಲ್ಲಿ 2023-24ನೇ ಸಾಲಿಗೆ ಖಾಲಿ ಇರುವ 14 ಬಿ.ಐ.ಇ.ಆರ್.ಟಿ. (ಪ್ರಾಥಮಿಕ) ಹಾಗೂ 1 ಬಿ.ಐ.ಇ.ಆರ್.ಟಿ. (ಮಾಧ್ಯಮಿಕ ಮತ್ತು ಪ್ರೌಢ) ಹುದ್ದೆಗೆ ಅರ್ಹ ವಿಶೇಷ ಶಿಕ್ಷಕರನ್ನು ನೇರ ಗುತ್ತಿಗೆ ಮೂಲಕ ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ 14 ಬಿ.ಐ.ಇ.ಆರ್.ಟಿ. (ಪ್ರಾಥಮಿಕ) ಹುದ್ದೆಗಳು:
ಬಂಟ್ವಾಳ -2,
ಬೆಳ್ತಂಗಡಿ– 2,
ಮಂಗಳೂರು ಉತ್ತರ-2,
ಮಂಗಳೂರು ದಕ್ಷಿಣ-2,
ಮೂಡಬಿದ್ರೆ – 2,
ಪುತ್ತೂರು – 2
ಸುಳ್ಯ -2 ಹಾಗೂ 1 ಬಿ.ಐ.ಇ.ಆರ್.ಟಿ. (ಮಾಧ್ಯಮಿಕ ಮತ್ತು ಪ್ರೌಢ) ಹುದ್ದೆಗೆ ವಿಕಲಚೇತನ ಮಕ್ಕಳಿಗೆ ಬೋಧಿಸುವ ವಿಶೇಷ ಬಿ.ಇಡಿ ಮತ್ತು ಪ್ರಾಥಮಿಕ ಹುದ್ದೆಗೆ ವಿಶೇಷ ಡಿ.ಇಡಿ ವಿದ್ಯಾರ್ಹತೆ ಪ್ರಮಾಣ ಪತ್ರ ಹಾಗೂ ಆರ್.ಸಿ.ಐ ಪ್ರಮಾಣ ಪತ್ರ ಹೊಂದಿರುವ ಅರ್ಹ ವಿಶೇಷ ಶಿಕ್ಷಕರು ಇದೇ ಜೂ.14ರಂದು ಮಧ್ಯಾಹ್ನ 3.30 ರೊಳಗೆ ಸೂಕ್ತ ದಾಖಲೆಯೊಂದಿಗೆ ನಗರದ ಕೊಟ್ಟಾರದಲ್ಲಿರುವ ಜಿಲ್ಲಾ ಪಂಚಾಯತ್ ನ ಸಮಗ್ರ ಶಿಕ್ಷಣ ಕರ್ನಾಟಕ ಈ ಕಚೇರಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಮೊಬೈಲ್: 9448952002 ಅನ್ನು ಸಂಪರ್ಕಿಸುವಂತೆ ಸಮಗ್ರ ಶಿಕ್ಷಣ ಉಪ ನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Commentaires